ಸಹಕಾರಿ ತತ್ವದಿಂದ ಅಭ್ಯುದಯ
ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ.)
“ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ” – ಎಂಬ ಸಹಕಾರಿ ತತ್ವದೊಂದಿಗೆ ಇಸವಿ 2005 ರಲ್ಲಿ, ಅಗತ್ಯವಿರುವ ಮತ್ತು ಅರ್ಹ ಸದಸ್ಯರುಗಳಿಗೆ ಅವರ ಜೀವನದ ಗುರಿಗಳನ್ನು ಸಾಧಿಸಲು ಆರ್ಥಿಕ ಸೇವೆಗಳನ್ನು ಒದಗಿಸುವ ಏಕೈಕ ಉದ್ದೇಶದಿಂದ, ಕೇವಲ 250 ಸದಸ್ಯರ ನೆರವಿನೊಂದಿಗೆ ಸಣ್ಣ ಸೌಹಾರ್ದ ಸಹಕಾರಿ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟ ನಮ್ಮ ಈ ಸಂಸ್ಥೆ ಇಂದು ಸದಸ್ಯರು ಸಂಪೂರ್ಣವಾಗಿ ತಮ್ಮ ಬೆಳವಣಿಗೆಯ ದೊಡ್ಡ ಪಾಲುದಾರ ಎಂದು ಗುರುತಿಸಲ್ಪಡುವ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಇವತ್ತು 15700 ಕ್ಕೂ ಹೆಚ್ಚು ಸದಸ್ಯರು ಮತ್ತು ಅವರ ಕುಟುಂಬಗಳ ಜೀವನಾಭಿವೃದ್ಧಿಯಲ್ಲಿ ನಾವು ಪಾಲುದಾರರಾಗಿದ್ದೇವೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ.
ಲಭ್ಯವಿರುವ ಸೇವೆಗಳು
ಹಣಕಾಸು ಸೇವೆಗಳು
ನಮ್ಮಲ್ಲಿ ಎಲ್ಲ ಬ್ಯಾಂಕುಗಳಲ್ಲಿ ದೊರೆಯುವ ಸೇವೆಗಳಿಗಿಂತ ಹೆಚ್ಚಿನ ಸೇವೆಗಳು ದೊರೆಯುತ್ತಿದ್ದು ಗ್ರಾಹಕರ ಸೇವೆಗಾಗಿ ಉತ್ತಮ ತಂತ್ರಜ್ಞಾನ ಮತ್ತು ಸೇವಾ ಮನೋಭಾವದೊಂದಿಗೆ ನಮ್ಮ ಸಿಬ್ಬಂದಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ
ಅರೆಕಾ ಮಾರ್ಕೆಟಿಂಗ್
ಸಣ್ಣ ಹಿಡುವಳಿದಾರರನ್ನು ಗಮನದಲ್ಲಿಟ್ಟುಕೊಂಡು ಅಡಿಕೆ ದಾಸ್ತಾನಿನ ಮೇಲೆ ಬೇಡಿಕೆಗೆ ತಕ್ಕಂತೆ ಶೀಘ್ರವಾಗಿ ಮುಂಗಡ ಸಾಲ ನೀಡಲಾಗುವುದು ಹಾಗೂ ಅಡಿಕೆ ಸಂಗ್ರಹಿಸಲು ಸುಸಜ್ಜಿತ ಗೋದಾಮುಗಳು ಇರುತ್ತವೆ.
ಶಾಪಿಂಗ್ ಮಾಲ್
ನಮ್ಮ ಉದ್ಯಮವನ್ನು ವೈವಿಧ್ಯಮಯಗೊಳಿಸುವ ಹಾಗೂ ಜನಸಾಮಾನ್ಯರಿಗೆ ದೈನಂದಿನ ವಸ್ತುಗಳ ಖರೀದಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನಮ್ಮದೇ ಕಟ್ಟಡ ಕಟ್ಟಿ ‘ಮಲೆನಾಡು ಮಳಿಗೆ’ ಶಾಪಿಂಗ್ ಮಾಲ್ ತೆರೆದಿದ್ದೇವೆ.
ಉದ್ಯಮ ವೈವಿಧ್ಯತೆ
ನಮ್ಮ ಉದ್ಯಮವನ್ನು ವೈವಿಧ್ಯಮಯಗೊಳಿಸುವ ಹಾಗೂ ಜನಸಾಮಾನ್ಯರಿಗೆ ದೈನಂದಿನ ವಸ್ತುಗಳ ಖರೀದಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನಮ್ಮದೇ ಕಟ್ಟಡ ಕಟ್ಟಿ ‘ಮಲೆನಾಡು ಮಳಿಗೆ’ ಶಾಪಿಂಗ್ ಮಾಲ್ ತೆರೆದಿದ್ದೇವೆ.
ಇದು ವಿನೋಬನಗರದ ಕೇಂದ್ರ ಭಾಗವಾದ ಪೊಲೀಸ್ ಚೌಕಿಯಲ್ಲಿದ್ದು ದಿನನಿತ್ಯದ, ಮನೆ ಬಳಕೆಯ ಎಲ್ಲ ದಿನಸಿ ಸಾಮಾನುಗಳು, ಸೌಂದರ್ಯ ಸಾಧನಗಳು, ಮನೆ ಬಳಕೆಯ ಉಪಕರಣಗಳು, ಹೀಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ. ಇದರಲ್ಲಿ, ಸಾವಯವ ಕೃಷಿಯಿಂದ ಬಂದ ಉತ್ಪನ್ನಗಳು, ಗೃಹೋತ್ಪನ್ನಗಳು, ಮಹಿಳಾ ಸಂಘ ಸಂಸ್ಥೆಗಳಲ್ಲಿ ತಯಾರಾದ ಉತ್ಕೃಷ್ಟ ದರ್ಜೆಯ ಉತ್ಪನ್ನಗಳು ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ, ಬೇರೆ ಬೇರೆ ತರಹದ ಕೊಡುಗೆಗಳೊಂದಿಗೆ ಲಭ್ಯವಿವೆ.
ಇದೇ ಮಳಿಗೆಯ ಮೇಲಿನ ಅಂತಸ್ತುಗಳಲ್ಲಿ ಆಫೀಸುಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಜಾಗಗಳನ್ನು ಯೋಗ್ಯ ದರದಲ್ಲಿ ಬಾಡಿಗೆಗೆ ನೀಡುವುದರ ಮೂಲಕ ಇಲ್ಲಿಯೂ ಸಹ ಸಮಾಜಕ್ಕೆ ಕಿಂಚಿತ್ ಸೇವೆಯನ್ನು ನೀಡುತ್ತಿದ್ದೇವೆ.
ಶಿವಮೊಗ್ಗದ ವಿನೋಬನಗರ ಹಾಗೂ ತೀರ್ಥಹಳ್ಳಿ ಶಾಖೆಗಳಲ್ಲಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವಿದೆ