ಅಂಕುರ - ವಿಪ್ರ ವಾಣಿಜ್ಯ ಸಂಕೀರ್ಣ
ವಿನೋಬ ನಗರದ ಹೃದಯ ಭಾಗದಲ್ಲಿ ವಿಪ್ರಟ್ರಸ್ಟ್-ಸಮೀಪದಲ್ಲಿ 4000 ಚದರಡಿಯ ನಿವೇಶನವನ್ನು ಖರೀದಿಸಲಾಯಿತು.
ಈ ನಿವೇಶನದಲ್ಲಿ 4-ಅಂತಸ್ತಿನ ಕಟ್ಟಡವನ್ನು 2.50 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ ಹಾಗೂ ಈ ಕಟ್ಟಡದಲ್ಲಿ ಸೆಲ್ಲರ್ ನಲ್ಲಿ ಮಲೆನಾಡು ಮಳಿಗೆಯ ಉಗ್ರಾಣ ಹಾಗು ಕಛೇರಿಯನ್ನು ನೆಲ ಅಂತಸ್ತಿನಲ್ಲಿ ವ್ಯಾಪಾರ ವಿಭಾಗವನ್ನು ಪ್ರಾರಂಭಿಸಲಾಗಿದೆ.
ಇದೇ ಮಳಿಗೆಯ 2, 3 ಮತ್ತು 4 ನೇ ಅಂತಸ್ತುಗಳಲ್ಲಿ ಆಫೀಸುಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಜಾಗಗಳನ್ನು ಯೋಗ್ಯ ದರದಲ್ಲಿ ಬಾಡಿಗೆಗೆ ನೀಡುವುದರ ಮೂಲಕ ಇಲ್ಲಿಯೂ ಸಹ ಸಮಾಜಕ್ಕೆ ಕಿಂಚಿತ್ ಸೇವೆಯನ್ನು ನೀಡುತ್ತಿದ್ದೇವೆ.
ಮಲೆನಾಡು ಮಳಿಗೆ - ಸೂಪರ್ ಬಜಾರ್
ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಅಂಕುರ ವಿಪ್ರ ವಾಣಿಜ್ಯ ಸಂಕೀರ್ಣ ಎಂಬ ಹೆಸರಿನ ಸಹಕಾರಿಯ ಸ್ವಂತ ಕಟ್ಟಡದಲ್ಲಿ ಮಲೆನಾಡು ಮಳಿಗೆ ಸೂಪರ್ ಬಜಾರ್ ಹೆಸರಿನಲ್ಲಿ ಮಲೆನಾಡಿನ ಬೆಳೆಗಳು ಮತ್ತು ರೈತರ ಇನ್ನಿತರ ಬೆಳೆಗಳು ಹಾಗೂ ಗೃಹ ಉತ್ಪನ್ನಗಳ ಮಾರಾಟದೊಂದಿಗೆ ಪ್ರತಿಷ್ಠಿತ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತಾ ಶಿವಮೊಗ್ಗದ ಜನರ ಮೆಚ್ಚುಗೆ ಪಡೆದಿದೆ
- ಮಲೆನಾಡಿನ ಜೇನುತುಪ್ಪ, ಜೋನಿ ಬೆಲ್ಲ, ಸಾವಯವ ಬೆಲ್ಲ, ಕಾಳು ಮೆಣಸು ವಾಟೆ ಹುಳಿ
- ಮನೆಯಲ್ಲಿಯೇ ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿಗಳು, ತಿಂಡಿ ತಿನಿಸುಗಳು
- ಕಷಾಯ ಪುಡಿಗಳು, ಆಯುರ್ವೇದ ಪುಡಿಗಳು, ಔಷಧಿ ಗುಣವುಳ್ಳ ತಂಪು ಪಾನೀಯಗಳು
- ಸಹಕಾರಿಯಿಂದಲೇ ತಯಾರಿಸಿದ ಉತ್ತಮ ಗುಣಮಟ್ಟದ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು
- ಗಾಣದಿಂದ ತಯಾರಿಸಿದ ಎಣ್ಣೆಗಳು, ಮಿಲ್ಲೆಟ್ಸ್ , ಹುರಿ ಹಿಟ್ಟು, ಚಟ್ನಿ ಪುಡಿಗಳು
- ಸೌಂದರ್ಯ ವರ್ಧಕಗಳು, ಪೂಜಾ ಸಾಮಗ್ರಿಗಳು
- ಛತ್ರಿಗಳು, ಜರ್ಕಿನ್ ಗಳು, ಆಕರ್ಷಕ ಸ್ಟೀಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳು
- ಸಹಕಾರಿಯಿಂದ ಸಾವಯವ ಭತ್ತ ಖರೀದಿ ಮಾಡಿ ಅಕ್ಕಿ ಮಾಡಿಸಿ ಮಾರಾಟ ಮಾಡಲಾಗುವುದು
- ಎಲ್ಲಾ ಸಾಮಗ್ರಿಗಳು ಉತ್ತಮ ಗುಣಮಟ್ಟದಾಗಿದ್ದು ಸೂಕ್ತ ಬೆಲೆಯಲ್ಲಿ ದೊರೆಯುತ್ತದೆ