ನಮ್ಮ ಸಹಕಾರಿಯ ಗ್ರಾಹಕರು ಹಾಗೂ ಸಾರ್ವಜನಿಕರ ಬಳಕೆಗಾಗಿ ಇತರೆ ಉಪಯೋಗಿ ಸೇವೆಗಳನ್ನು ವಿಪ್ರ ಸೌಹಾರ್ದ ಸಹಕಾರಿಯು ಒದಗಿಸಲು ಮುಂದಾಗಿದೆ
ಈ ಸ್ಟ್ಯಾಂಪ್ ,ಮಣಿಪಾಲ್ ಕಾರ್ಡ್ ,ಎಲ್ ಐ ಸಿ, ಇಫ್ಕೋ ವಿಮೆ ,ಯಶಸ್ವಿನಿ ಯೋಜನೆಗಳ ಮಾಹಿತಿಗಾಗಿ ನಿಮ್ಮ ಹತ್ತಿರದ ನಮ್ಮ ಶಾಖೆಯನ್ನು ಸಂಪರ್ಕಿಸಿ
ಇ-ಸ್ಟ್ಯಾಂಪ್
ಇ-ಸ್ಟಾಂಪ್ ಪೇಪರ್ ಎನ್ನುವುದು ಸ್ಟ್ಯಾಂಪ್ ಡ್ಯೂಟಿಯನ್ನು ವಿದ್ಯುನ್ಮಾನವಾಗಿ ಸರ್ಕಾರಕ್ಕೆ ಪಾವತಿಸುವ ಪ್ರಕ್ರಿಯೆಯಾಗಿದೆ. ವೇಗವಾದ ಮತ್ತು ತೊಂದರೆ-ಮುಕ್ತ ಪಾವತಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಾಂಪ್ರದಾಯಿಕ ಪೇಪರ್ ಮತ್ತು ಫ್ರ್ಯಾಂಕಿಂಗ್ ಸ್ಟಾಂಪಿಂಗ್ ವಿಧಾನವನ್ನು ಡಿಜಿಟಲ್ ತಂತ್ರದೊಂದಿಗೆ ಬದಲಾಯಿಸಿದೆ.
ಇ-ಸ್ಟಾಂಪ್ ಪೇಪರ್ ಪಡೆಯಲು ನಮ್ಮ ಸಹಕಾರಿಯ ಪ್ರಧಾನ ಕಾರ್ಯಾಲಯ ಅಥವಾ ಶಾಖೆಗಳನ್ನು ಸಂಪರ್ಕಿಸಿ
ಸೇಫ್ ಡಿಪಾಸಿಟ್ ಲಾಕರ್
ನಿಮ್ಮ ಅತ್ಯಂತ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಲು ಸೇಫ್ ಡಿಪಾಸಿಟ್ ಲಾಕರ್ ಅತ್ಯಂತ ಸೂಕ್ತ ವಿಧಾನ.
ವಿಪ್ರ ವಿವಿಧೋದ್ದೇಶ ಸಹಕಾರಿಯ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಶಾಖೆಗಳಲ್ಲಿ ಅತಿ ಕಡಿಮೆ ದರದಲ್ಲಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯ ಒದಗಿಸಲಾಗಿದೆ.
ವಿಮಾ ಪ್ರತಿನಿಧಿತ್ವ
ಮಣಿಪಾಲ್ ಆರೋಗ್ಯ ಕಾರ್ಡ್ ನ ನೋಂದಣಿ ನಮ್ಮ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ.
ಭಾರತ ಅತಿ ದೊಡ್ಡ ವಿಮಾ ಸಂಸ್ಥೆಯಾದ ಜೀವ ವಿಮಾ ನಿಗಮ [L I C ] ಯ ಪಾಲಿಸಿಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು, ಪಾಲಿಸಿ ಪಡೆಯಲು ನಮ್ಮ ಶಾಖೆಗಳನ್ನು ಸಂಪರ್ಕಿಸಿ.
ಇಫ್ಕೋ ಟೋಕ್ಯೊ ವಿಮಾ ಕಂಪನಿಯ ವಾಹನ ವಿಮೆ, ವೈಯಕ್ತಿಕ ಅಪಘಾತ ವಿಮೆ, ಆರೋಗ್ಯ ವಿಮೆ ಪಾಲಿಸಿಗಳನ್ನು ನಮ್ಮ ಶಾಖೆಯಲ್ಲಿ ನೋಂದಣಿ / ನವೀಕರಣ ಮಾಡುವ ಸೌಲಭ್ಯ ಪಡೆಯಬಹುದು