ರೈತ ಮಿತ್ರ - ಅರೆಕಾ ಮಾರ್ಕೆಟಿಂಗ್ಅಡಿಕೆ ಬೆಳೆಗಾರಿಗಾಗಿ
ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತೀರ್ಥಹಳ್ಳಿ, ಸಾಗರ ,ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಎ.ಪಿ.ಎಂ.ಸಿ ಆವರಣದಲ್ಲಿ “ರೈತಮಿತ್ರ ಅರೆಕಾ ಮಾರ್ಕೆಟಿಂಗ್” ಎಂಬ ಹೆಸರಿನಲ್ಲಿ ದಲ್ಲಾಳಿಮಂಡಿಯನ್ನು ಪ್ರಾರಂಭಿಸಿದೆ.
ರೈತರಿಂದ ಬಂದ ಅಡಿಕೆಯನ್ನು ಸುರಕ್ಷಿತ ಗೋದಾಮಿನಲ್ಲಿ ವಿಮಾ ರಕ್ಷಣೆಯೊಂದಿಗೆ ಸಂರಕ್ಷಿಸಿ ಇಡಲಾಗುತ್ತದೆ. ಅಡಿಕೆ ದಾಸ್ತಾನಿನ ಮೇಲೆ ಬೇಡಿಕೆಗೆ ತಕ್ಕಂತೆ ಶೀಘ್ರವಾಗಿ ಸಾಲದ ಮುಂಗಡವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವುದು. ಉತ್ತಮ ಮತ್ತು ಸ್ಪರ್ಧಾತ್ಮಕ ಸೇವೆ ನೀಡುವುದರೊಂದಿಗೆ ಅಡಿಕೆಗೆ ಉತ್ತಮ ಧಾರಣೆ ನೀಡಿ ಮಾರಾಟಗಾರರಿಂದ ವ್ಯಾಪಾರವಾದ ತಕ್ಷಣ ಅನ್ ಲೈನ್ ಮೂಲಕವೂ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ಕನಿಷ್ಟ 2 ವರ್ಷ ಅಡಿಕೆ ವ್ಯವಹಾರ ನಡೆಸಿದ ಸದಸ್ಯರಿಗೆ ಅಡಿಕೆ ಸಂಸ್ಕರಣಾ ಸಾಲವನ್ನು ರೂ. 5 ಲಕ್ಷದವರೆಗೆ ನೀಡಲಾಗುತ್ತಿದೆ.
ಅಡಿಕೆ ದಾಸ್ತಾನು
ಅಡಿಕೆ ಬೆಳೆಗಾರರಿಗೆ ವಿಶೇಷ ಸಾಲ ಯೋಜನೆಗಳು
ಅಡಿಕೆ ಬೆಳೆಗಾರರು ನಮ್ಮ ಜಿಲ್ಲೆಯ ವಾಣಿಜ್ಯ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂದಿದ್ದಾರೆ ಮತ್ತು ಅವರು ಹೆಚ್ಚಿನ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರಾಟ ಮಾಡದೇ ಉತ್ತಮ ಬೆಲೆಗಾಗಿ ಕಾಯಬೇಕಾದ ಪರಿಸ್ಥಿತಿ ಬರುವುದರಿಂದ ಅವರ ಅಲ್ಪಾವಧಿ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಈ ಕೆಳಗಿನ ಸಾಲ ಯೋಜನೆಗಳನ್ನು ರೂಪಿಸಿದ್ದೇವೆ.
ಅಡಿಕೆ ದಾಸ್ತಾನಿನ (ಗೋದಾಮಿನಲ್ಲಿ ಸಂಗ್ರಹವಿರುವ) ಆಧಾರದ ಮೇಲೆ ಸಾಲ
ಅಡಿಕೆ ದಾಸ್ತಾನಿನ ಮೇಲೆ ಕನಿಷ್ಠ ಮಾರ್ಜಿನ್ ಇಟ್ಟುಕೊಂಡು ಅಲ್ಪಾವಧಿಗಾಗಿ ಯೋಗ್ಯ ಬಡ್ಡಿ ದರದಲ್ಲಿ ಸಾಲ ಕೊಡಲಾಗುವುದು. ಅಡಿಕೆಯ ಮಾರಾಟವಾದ ಕೂಡಲೇ ಸಾಲವನ್ನು ಮರುಪಾವತಿ ಮಾಡಬೇಕಾಗಿರುತ್ತದೆ. ರೈತರು ತಮ್ಮ ಅಗತ್ಯಕ್ಕನುಗುಣವಾಗಿ ಈ ಯೋಜನೆಯ ಲಾಭ ಪಡೆಯಬಹುದು.
ಅಡಿಕೆ ಸಂಸ್ಕರಣಾ ಸಾಲ
ಅಡಿಕೆಯನ್ನು ಕೊಯಿಲು ಮಾಡಿ, ಸುಲಿದು, ಸಂಸ್ಕರಣೆ ಮಾಡುವುದು ಸಮಯ ತೆಗೆದುಕೊಳ್ಳುವ ಮತ್ತು ಹೆಚ್ಚು ಖರ್ಚು ಬರುವ ಕೆಲಸ. ಇದಕ್ಕಾಗಿ ರೈತರಿಗೆ ಅಲ್ಪಾವಧಿಗಾಗಿ ಹಣಕಾಸಿನ ಅಗತ್ಯವಿದ್ದಾಗ ನಮ್ಮ ಈ ಯೋಜನೆಯ ಸಹಾಯ ಪಡೆಯಬಹುದು. ರೈತರ ಅಗತ್ಯಕ್ಕೆ ತಕ್ಕಂತೆ ಒಂದು ಗುಂಟೆಗೆ ರೂ. 2500/ ರಂತೆ 5 ಲಕ್ಷ ರೂಪಾಯಿ ವರೆಗಿನ ಸಾಲ ಪಡೆಯಬಹುದಾಗಿದೆ.