ನಮ್ಮ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನಾವು ವ್ಯಾಪಕ ಶ್ರೇಣಿಯ ಸಾಲಗಳು ಮತ್ತು ಮುಂಗಡಗಳನ್ನು ಒದಗಿಸುತ್ತೇವೆ. ಕೆಲವು ಪ್ರಮುಖ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಕಾರ್ಯಾಲಯ ಅಥವಾ ಶಾಖೆಗಳನ್ನು ಸಂಪರ್ಕಿಸಿ
ವಾಹನ ಖರೀದಿ ಸಾಲ
ದ್ವಿಚಕ್ರ ವಾಹನ ಖರೀದಿಗಾಗಿ: ಎಲ್ಲ ವರ್ಗದ ನಿರಂತರ ಆದಾಯ ಹೊಂದಿರುವ ವ್ಯಕ್ತಿಗಳು ಈ ಸಾಲವನ್ನು ನಿಯಮಾವಳಿಗನುಸಾರವಾಗಿ ಪಡೆಯಬಹುದಾಗಿದ್ದು, ಕಡಿಮೆ ಮಾರ್ಜಿನ್ ಮತ್ತು ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ನೌಕರ ವರ್ಗದವರಿಗೆ ಹಾಗು ಸಣ್ಣ ಉದ್ದಿಮೆದಾರರಿಗೆ ಈ ಯೋಜನೆ ಸೂಕ್ತವಾಗಿದೆ
ಲಘು ವಾಹನ ಖರೀದಿಗಾಗಿ: ಬಾಡಿಗೆಗಾಗಿ ಅಥವಾ ಸ್ವಂತ ಉಪಯೋಗಕ್ಕಾಗಿ ಕಾರು ಮತ್ತು ಇತರ ಲಘು ವಾಹನಗಳನ್ನು ಸಂಸ್ಥೆಯ ಯೋಜನೆಯ ನಿಯಮಗಳಿಗನುಸಾರವಾಗಿ ಹೈಪೋಥಿಕೇಷನ್ ಅಥವಾ ಹಯರ್ ಪರ್ಚೆಸ್ ನಿಯಮಗಳಡಿಯಲ್ಲಿ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಕಾರುಗಳು, ರಿಕ್ಷಾ, ಸಣ್ಣ ಟ್ರಕ್ ಹಾಗೂ ಇತರ ಎಲ್ ಎಂ ವಿ ಗಳನ್ನು ಖರೀದಿಸಬಹುದು
ಭಾರಿ ವಾಹನ ಸಾಲಗಳು: ಈ ಯೋಜನೆಯಡಿಯಲ್ಲಿ ಎಲ್ಲ ತರಹದ ಭಾರಿ ವಾಹನಗಳನ್ನು ನಿಯಮಾನುಸಾರ ಪಡೆಯಬಹುದು. ವಾಹನಗಳನ್ನು ಅಡವು ಮಾಡುವುದಲ್ಲದೇ ನಿಯಮಕ್ಕನುಗುಣವಾಗಿ ಬೇರೆ ಆಧಾರಗಳನ್ನು ಒದಗಿಸಬೇಕಾಗಬಹುದು.
ದ್ವಿಚಕ್ರ ವಾಹನ | 1 ಲಕ್ಷದ ವರೆಗೆ | 15.50% |
ಲಘು ಮೋಟಾರು ವಾಹನ | 1 ಲಕ್ಷದಿಂದ 10 ಲಕ್ಷದ ವರೆಗೆ | 13.00% |
ಭಾರಿ ಮೋಟಾರು ವಾಹನ | 13.00% |