ಸಾಲ ಸೌಲಭ್ಯ

ವಿಪ್ರ ಸೌಹಾರ್ದ ಸಹಕಾರಿ

ನಮ್ಮ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನಾವು ವ್ಯಾಪಕ ಶ್ರೇಣಿಯ ಸಾಲಗಳು ಮತ್ತು ಮುಂಗಡಗಳನ್ನು ಒದಗಿಸುತ್ತೇವೆ. ಕೆಲವು ಪ್ರಮುಖ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಕಾರ್ಯಾಲಯ ಅಥವಾ ಶಾಖೆಗಳನ್ನು ಸಂಪರ್ಕಿಸಿ

ಜಾಮೀನು ಸಾಲ

ಇದೊಂದು ವಯಕ್ತಿಕ ಸಾಲವಾಗಿದ್ದು ಅರ್ಜಿದಾರರೊಂದಿಗೆ ಇನ್ನೊಬ್ಬ ವ್ಯಕ್ತಿಯ ಜಾಮೀನು ಪಡೆದುಕೊಂಡು ಸಾಲ ಕೊಡಲಾಗುತ್ತದೆ. ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ

ಸ್ಥಿರಾಸ್ತಿ ಅಡಮಾನ ಸಾಲ

ಅರ್ಜಿದಾರರು ತಮ್ಮ ಹೆಸರಿನಲ್ಲಿರುವ ಮನೆ ನಿವೇಶನ, ವಾಸದಮನೆ, ಯಾವುದೇ ವಾಣಿಜ್ಯಕಟ್ಟಡ, ವ್ಯಾಪಾರ ಸಂಕೀರ್ಣ, ಅಥವಾ ಸಂಸ್ಥೆಗೆ ಒಪ್ಪಿಗೆಯಾಗುವಂತಹ ಯಾವುದೇ ಸ್ಥಿರಾಸ್ತಿಗಳನ್ನು ಅಡವುಮಾಡಿ ಸಾಲ ಪಡೆಯಬಹುದಾಗಿದೆ

ಚಿನ್ನಾಭರಣ ಅಡಮಾನ ಸಾಲ

ಬಂಗಾರದ ಆಭರಣ, ಒಡವೆಗಳನ್ನು ಅಡವಿಟ್ಟು ಅದರ ಮೌಲ್ಯ ಮಾಪನದ ಆಧಾರದ ಮೇಲೆ ಸದಸ್ಯರು ಸಾಲ ಪಡೆಯಬಹುದು. ಅದಕ್ಕೆ ನಿಯತಕಾಲಿಕವಾಗಿ ಬಡ್ಡಿಯನ್ನು ಕಟ್ಟಬೇಕು ಮತ್ತು ಅವಧಿಯ ಒಳಗಾಗಿ ಸಂಪೂರ್ಣ ಸಾಲ ಪಾವತಿಮಾಡಬೇಕು.

ಉಳಿತಾಯ ಪತ್ರ ಆಧಾರದಮೇಲೆ ಸಾಲ

ಅಂಚೆ ಕಛೆರಿಯಲ್ಲಿ ಉಳಿತಾಯ ಮಾಡಿದ ರಾಷ್ಟೀಯ ಉಳಿತಾಯ ಪತ್ರ (N.S.C), ಕಿಸಾನ್ ವಿಕಾಸ್ ಪತ್ರಗಳನ್ನು ಆಧಾರ ಮಾಡಿಕೊಂಡು ಸದಸ್ಯರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಲಾಗುವುದು

ಠೇವಣಿ ಆಧಾರದ ಓವರ್ ಡ್ರಾಫ್ಟ್ ಅಥವಾ ಸಾದಾ ಸಾಲ

ನಮ್ಮ ಸಂಸ್ಥೆಯಲ್ಲಿ ಇಟ್ಟಿರುವ ವಿವಿಧ ಠೇವಣಿಗಳ ಆಧಾರದ ಮೇಲೆ ಅರ್ಜಿದಾರರ ಅವಶ್ಯಕತೆಗಳಿಗೆ ತಕ್ಕಂತೆ ಓವರ್ ಡ್ರಾಫ್ಟ್  ಅಥವಾ ಸಾದಾಸಾಲವನ್ನು ನೀಡುತ್ತೇವೆ.

ಮೀರೆಳೆತಸಾಲ (ಓವರ್ ಡ್ರಾಫ್ಟ್)

ಅರ್ಜಿದಾರರ ಉದ್ಯಮ, ವ್ಯಾಪಾರ ವಹಿವಾಟು, ಸ್ವಂತವೃತ್ತಿ, ಅಥವಾ ಇನ್ನಾವುದೇ ಉದ್ಯೋಗದ ಅಲ್ಪಾವಧಿ ಕಾರ್ಯವಾಹಿ ಬಂಡವಾಳದ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಮೀರೆಳೆತ ಸಾಲ ನೀಡುತ್ತೇವೆ.

ವಾಮನ ನಿಧಿ ಆಧಾರಿತ ವ್ಯವಹಾರ ಸಾಲ

ವಾಮನ ನಿಧಿ ಖಾತೆಯಲ್ಲಿ ಕ್ರಮವಾಗಿ ವ್ಯವಹರಿಸಿದ ಆಧಾರದಮೇಲೆ ಅರ್ಜಿದಾರರ ಅವಶ್ಯಕತೆಗಳಿಗೆ ತಕ್ಕಂತೆ ಸಾಲವನ್ನು ನೀಡಲಾಗುವುದು.

ಸೌರ ವಿದ್ಯುತ್ಘಟಕ ಅಳವಡಿಕೆ ಸಾಲ

ಅರ್ಜಿದಾರರು ತಮ್ಮ ಮನೆಯ ಛಾವಣಿ ಮೇಲೆ ಅಥವಾ ಇನ್ನಾವುದೇ ಸೂಕ್ತ ಜಾಗದಲ್ಲಿ ಸೌರ ವಿದ್ಯುತ್ಘಟಕ ಅಳವಡಿಸಲು ಆಕರ್ಷಕ ಬಡ್ಡಿದರದಲ್ಲಿ ಸಾಲ ಕೊಡಲಾಗುವುದು.

ತತ್ಕಾಲ್ ಸಾಲ

ನಮ್ಮ ಸಂಸ್ಥೆಯಲ್ಲಿ ಠೇವಣಿ ಇರಿಸಿದ ಅಥವಾ ಸ್ಥಿರಾಸ್ಥಿ ಸಾಲ ಪಡೆದುಕೊಂಡಿರುವ ಸದಸ್ಯರಿಗೆ ತುರ್ತು ಕೆಲಸಗಳಿಗಾಗಿ  ಈ ಯೋಜನೆಯಡಿಯಲ್ಲಿ ಕೂಡಲೇ ಸಾಲ ಕೊಡಲಾಗುವುದು

ವಾಹನ ಖರೀದಿ ಸಾಲ

ದ್ವಿಚಕ್ರ ವಾಹನ ಖರೀದಿಗಾಗಿ: ಎಲ್ಲ ವರ್ಗದ ನಿರಂತರ ಆದಾಯ ಹೊಂದಿರುವ ವ್ಯಕ್ತಿಗಳು ಈ ಸಾಲವನ್ನು ನಿಯಮಾವಳಿಗನುಸಾರವಾಗಿ ಪಡೆಯಬಹುದಾಗಿದ್ದು, ಕಡಿಮೆ ಮಾರ್ಜಿನ್ ಮತ್ತು ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ನೌಕರ ವರ್ಗದವರಿಗೆ ಹಾಗು ಸಣ್ಣ ಉದ್ದಿಮೆದಾರರಿಗೆ ಈ ಯೋಜನೆ ಸೂಕ್ತವಾಗಿದೆ

ಲಘು ವಾಹನ ಖರೀದಿಗಾಗಿ: ಬಾಡಿಗೆಗಾಗಿ ಅಥವಾ ಸ್ವಂತ ಉಪಯೋಗಕ್ಕಾಗಿ ಕಾರು ಮತ್ತು ಇತರ ಲಘು ವಾಹನಗಳನ್ನು ಸಂಸ್ಥೆಯ ಯೋಜನೆಯ ನಿಯಮಗಳಿಗನುಸಾರವಾಗಿ ಹೈಪೋಥಿಕೇಷನ್ ಅಥವಾ ಹಯರ್ ಪರ್ಚೆಸ್ ನಿಯಮಗಳಡಿಯಲ್ಲಿ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಕಾರುಗಳು, ರಿಕ್ಷಾ, ಸಣ್ಣ ಟ್ರಕ್ ಹಾಗೂ ಇತರ ಎಲ್ ಎಂ ವಿ ಗಳನ್ನು ಖರೀದಿಸಬಹುದು

ಭಾರಿ ವಾಹನ ಸಾಲಗಳು: ಈ ಯೋಜನೆಯಡಿಯಲ್ಲಿ  ಎಲ್ಲ ತರಹದ ಭಾರಿ ವಾಹನಗಳನ್ನು ನಿಯಮಾನುಸಾರ ಪಡೆಯಬಹುದು. ವಾಹನಗಳನ್ನು ಅಡವು ಮಾಡುವುದಲ್ಲದೇ ನಿಯಮಕ್ಕನುಗುಣವಾಗಿ ಬೇರೆ ಆಧಾರಗಳನ್ನು ಒದಗಿಸಬೇಕಾಗಬಹುದು.

ದ್ವಿಚಕ್ರ ವಾಹನ 1 ಲಕ್ಷದ ವರೆಗೆ 15.50%
ಲಘು ಮೋಟಾರು ವಾಹನ 1 ಲಕ್ಷದಿಂದ 10 ಲಕ್ಷದ ವರೆಗೆ 13.00%
ಭಾರಿ ಮೋಟಾರು ವಾಹನ 13.00%
Two_Wheeler_Loan