ಇಸವಿ 2005 ರಲ್ಲಿ, ಅಗತ್ಯವಿರುವ ಮತ್ತು ಅರ್ಹ ಸದಸ್ಯರುಗಳಿಗೆ ಅವರ ಜೀವನದ ಗುರಿಗಳನ್ನು ಸಾಧಿಸಲು ಆರ್ಥಿಕ ಸೇವೆಗಳನ್ನು ಒದಗಿಸುವ ಏಕೈಕ ಉದ್ದೇಶದಿಂದ, ಕೇವಲ 250 ಸದಸ್ಯರ ನೆರವಿನೊಂದಿಗೆ ಸಣ್ಣ ಸೌಹಾರ್ದ ಸಹಕಾರಿ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟ ನಮ್ಮ ಈ ಸಂಸ್ಥೆ ಇಂದು ಸದಸ್ಯರು ಸಂಪೂರ್ಣವಾಗಿ ತಮ್ಮ ಬೆಳವಣಿಗೆಯ ದೊಡ್ಡ ಪಾಲುದಾರ ಎಂದು ಗುರುತಿಸಲ್ಪಡುವ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಇವತ್ತು 14000 ಕ್ಕೂ ಹೆಚ್ಚು ಸದಸ್ಯರು ಮತ್ತು ಅವರ ಕುಟುಂಬಗಳ ಜೀವನಾಭಿವೃದ್ಧಿಯಲ್ಲಿ ನಾವು ಪಾಲುದಾರರಾಗಿದ್ದೇವೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಇಂತಹ ಸಂಸ್ಥೆಗಳ ಅಗತ್ಯವನ್ನು ಕಂಡುಕೊಂಡು, ಸಂಸ್ಥೆಯನ್ನು ಸ್ಥಾಪಿಸಿ, ಬೆಳೆಸಿಕೊಂಡು ಬರುವಲ್ಲಿ ನಮ್ಮ ದೂರದೃಷ್ಟಿಯುಳ್ಳ, ಉದ್ಯೋಗಿಗಳಲ್ಲಿ ಮತ್ತು ಸದಸ್ಯರಲ್ಲಿ ಧನಾತ್ಮಕ ಕ್ರಿಯಾಶೀಲತೆಯನ್ನು ತುಂಬಿ ಮುನ್ನಡೆಸಿದ ನಿರ್ದೇಶಕರುಗಳಿಗೆ ಸಂಸ್ಥೆ ಚಿರಋಣಿಯಾಗಿದೆ.
ಶಿವಮೊಗ್ಗದ ವಿನೋಬನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ನಮ್ಮ ವೈಯಕ್ತಿಕ ಗ್ರಾಹಕರು, ಸಣ್ಣ ರೈತರು, ಕುಶಲ ಕರ್ಮಿಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಅಗತ್ಯತೆಗಳನ್ನು ಪೂರೈಸಲು ನಾವು ಜಿಲ್ಲೆಯ ಕೆಲವು ಉಪನಗರ ಪ್ರದೇಶಗಳಲ್ಲಿ ನಮ್ಮ ಶಾಖೆಗಳನ್ನು ಸ್ಥಾಪಿಸಿದ್ದೇವೆ ಮತ್ತು ಗ್ರಾಹಕರ ಸೇವೆಗಾಗಿ ಅನೇಕ ಉಪಯುಕ್ತ ಯೋಜನೆಗಳನ್ನು ರೂಪಿಸಿದ್ದೇವೆ
ಬೆಳೆದು ಬಂದ ದಾರಿ
ಇಸವಿ 2005 ರಲ್ಲಿ, ಅಗತ್ಯವಿರುವ ಮತ್ತು ಅರ್ಹ ಸದಸ್ಯರುಗಳಿಗೆ ಅವರ ಜೀವನದ ಗುರಿಗಳನ್ನು ಸಾಧಿಸಲು ಆರ್ಥಿಕ ಸೇವೆಗಳನ್ನು ಒದಗಿಸುವ ಏಕೈಕ ಉದ್ದೇಶದಿಂದ, ಕೇವಲ 250 ಸದಸ್ಯರ ನೆರವಿನೊಂದಿಗೆ ಸಣ್ಣ ಸೌಹಾರ್ದ ಸಹಕಾರಿ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟ ನಮ್ಮ ಈ ಸಂಸ್ಥೆ ಇಂದು ಸದಸ್ಯರು ಸಂಪೂರ್ಣವಾಗಿ ತಮ್ಮ ಬೆಳವಣಿಗೆಯ ದೊಡ್ಡ ಪಾಲುದಾರ ಎಂದು ಗುರುತಿಸಲ್ಪಡುವ ಸಂಸ್ಥೆಯಾಗಿ ಬೆಳೆದು ನಿಂತಿದೆ.
ರೂಪಾಯಿ 5000.00 ಬೆಲೆಯ ಷೇರಿನೊಂದಿಗೆ 245 ಸದಸ್ಯರಿಂದ ಪ್ರಾರಂಭವಾದ ನಮ್ಮ ಸಹಕಾರಿಯು ಇವತ್ತು 14000 ಕ್ಕೂ ಹೆಚ್ಚು ಸದಸ್ಯರು ಮತ್ತು ಅವರ ಕುಟುಂಬಗಳ ಜೀವನಾಭಿವೃದ್ಧಿಯಲ್ಲಿ ನಾವು ಪಾಲುದಾರರಾಗಿದ್ದೇವೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ.
ಬೆಳವಣಿಗೆಯ ಪಕ್ಷಿನೋಟ
ಸಂಸ್ಥೆಯ ದೂರದೃಷ್ಠಿ
- ನಮ್ಮ ಎಲ್ಲಾ ಪಾಲುದಾರರು, ಹೂಡಿಕೆದಾರರು, ಗ್ರಾಹಕರು, ಉದ್ಯೋಗಿಗಳು, ಸರಬರಾಜುದಾರರು, ಮತ್ತು ಎಲ್ಲ ಸಹವರ್ತಿಗಳ ಬೆಳವಣಿಗೆಯಲ್ಲಿ ಆದ್ಯತೆಯ ಪಾಲುದಾರರ ಪಾತ್ರ ವಹಿಸುವುದು.
- ಸಹಕಾರಿ ಸೌಹಾರ್ದ ಸಂಸ್ಥೆಗಳ ಮೂಲಭೂತ ತತ್ವಗಳಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ನಮ್ಮ ಸದಸ್ಯರ ಆರ್ಥಿಕ, ಸಾಮಾಜಿಕ ಬೆಳವಣಿಗೆಯ ಸೂತ್ರಧಾರರಾಗಿ, ನಮ್ಮ ಸಂಸ್ಥೆಯ ಸಂಪರ್ಕಕ್ಕೆ ಬಂದ ಎಲ್ಲ ವರ್ಗಗಳ ಸದಸ್ಯರ ಜೀವನವನ್ನು ಹೆಚ್ಚು ಉಜ್ವಲವನ್ನಾಗಿ ಮಾಡುವುದರ ಮೂಲಕ ಕರ್ನಾಟಕ ರಾಜ್ಯದ ಅತ್ಯುತ್ತಮ ಸೌಹಾರ್ದ ಸಹಕಾರಿ ಸಂಸ್ಧೆಗಳಲ್ಲೊಂದಾಗಿ ಹೊರಹೊಮ್ಮುವುದು.
- ನಮ್ಮ ಸಂಸ್ಥೆಯ ಎಲ್ಲ ಸೇವೆಗಳಲ್ಲಿ ಮಾನವೀಯ ಮೌಲ್ಯಗಳನ್ನುಳಿಸಿಕೊಂಡು ತಂತ್ರಜ್ಞಾನವನ್ನು ಅಳವಡಿಸಿ ಸೇವೆಗಳನ್ನು ಹೆಚ್ಚು ಗ್ರಾಹಕಕೇಂದ್ರಿತವಾಗಿಸುವುದು
ಸಂಸ್ಥೆಯ ಮೌಲ್ಯಗಳು
- ಗ್ರಾಹಕ ಕೇಂದ್ರಿತ ಸೇವೆಗಳು – ಗ್ರಾಹಕರೇ ನಮ್ಮ ಉದ್ದೇಶ.
- ಸುಧಾರಣೆಯ ಅವಿಷ್ಕಾರಗಳೇ ಪ್ರಗತಿಯ ಕೀಲಿಕೈಗಳು.
- ಮಾನವೀಯ ಸಂಬಂಧಗಳೊಂದಿಗೆ ತಾಂತ್ರಿಕ ಆಧುನೀಕರಣ.
- ಎಲ್ಲ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತ ನಡವಳಿಕೆಗಳು
- ಸದಸ್ಯರ ಮತ್ತು ಉದ್ಯೋಗಿಗಳ ಸಬಲೀಕರಣ.
- ಕೂಡಿ ಬೆಳೆಯುವ ಮನೋಭಾವನೆಯನ್ನು ಬೆಳೆಸುವುದು.
ಗುರಿ ಸಾಧನೆಯ ಮಾರ್ಗ
- ಸದಸ್ಯರಲ್ಲಿ ಮುಂದಿನ ಏಳಿಗೆಗಾಗಿ ಸತತ ಉಳಿತಾಯದ ಮನೋಭಾವನೆಯನ್ನು ಬೆಳೆಸುವುದು.
- ಬ್ಯಾಂಕಿಂಗ್ ಮತ್ತು ಹಣಕಾಸಿನ ಸೇವೆಗಳಲ್ಲಿ ಎಲ್ಲರೂ ಒಂದೇ ಎಂಬ ಸಮಾನ ಮನೋಧರ್ಮದಿಂದ ವ್ಯವಹರಿಸಿ ನಮ್ಮ ಗ್ರಾಹಕರು ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ನೆರವಾಗುವುದು
- ಸಾವಯವ ಆಹಾರ ಉತ್ಪನ್ನಗಳಿಗಾಗಿ ಗೃಹ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಅಭಿವೃದ್ಧಿಪಡಿಸಲು ಸಣ್ಣ ರೈತರು ಮತ್ತು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು, ಅವರ ಉತ್ಪನ್ನಗಳಿಗೆ ಮಾರಾಟ ಮತ್ತು ಮಾರುಕಟ್ಟೆ ಬೆಂಬಲವನ್ನು ನೀಡುವುದರ ಮೂಲಕ ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು.
- ನಮ್ಮ ಎಲ್ಲ ಸೇವಾಕ್ಷೇತ್ರಗಳಲ್ಲಿ ವೃತ್ತಿಪರ ಸಮಗ್ರತೆ ಮತ್ತು ನ್ಯಾಯಸಮ್ಮತ ನಡೆಗಳಲ್ಲಿ ಹೊಸ ಮಾನದಂಡಗಳನ್ನು ನಿರ್ಮಿಸುವುದು.
- ಉದ್ಯೋಗಿಗಳಲ್ಲಿ ಒಟ್ಟಾಗಿ ಕೆಲಸಮಾಡಿ ಸೇವೆಯಲ್ಲಿ ಶ್ರೇಷ್ಟತೆಯನ್ನು ಸಾಧಿಸುವ ಮನೋಭಾವನೆಯನ್ನು ಬೆಳೆಸುವುದರ ಮೂಲಕ ಅವರ ವೈಯುಕ್ತಿಕ ಜೀವನದಲ್ಲಿ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಪ್ರೇರೇಪಿಸುವುದು.
- ನಿರಂತರ ನಾವೀನ್ಯತೆಯ ಮೂಲಕ ಅತ್ಯುನ್ನತ ಗುಣಮಟ್ಟದ ಸೇವೆಗಳನ್ನು ಸಲ್ಲಿಸುವುದು ಮತ್ತು ಸದಸ್ಯರು ನಮ್ಮ ಸಂಸ್ಥೆಯೊಂದಿಗೆ ವ್ಯವಹರಿಸಲು ಹೆಮ್ಮೆಪಡುವಂತೆ ನಾವು ನಡೆದುಕೊಳ್ಳುವುದು.
ಲಭ್ಯವಿರುವ ಸೇವೆಗಳು
ಹಣಕಾಸು ಸೇವೆಗಳು
ನಮ್ಮಲ್ಲಿ ಎಲ್ಲ ಬ್ಯಾಂಕುಗಳಲ್ಲಿ ದೊರೆಯುವ ಹೆಚ್ಚಿನ ಸೇವೆಗಳು ದೊರೆಯುತ್ತಿದ್ದು ಗ್ರಾಹಕರ ಸೇವೆಗಾಗಿ ಉತ್ತಮ ತಂತ್ರಜ್ಞಾನ ಮತ್ತು ಸೇವಾ ಮನೋಭಾವದೊಂದಿಗೆ ನಮ್ಮ ಸಿಬ್ಬಂದಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ
ಅರೆಕಾ ಮಾರ್ಕೆಟಿಂಗ್
ಸಣ್ಣ ಹಿಡುವಳಿದಾರರನ್ನು ಗಮನದಲ್ಲಿಟ್ಟುಕೊಂಡು ಅಡಿಕೆ ದಾಸ್ತಾನಿನ ಮೇಲೆ ಬೇಡಿಕೆಗೆ ತಕ್ಕಂತೆ ಶೀಘ್ರವಾಗಿ ಮುಂಗಡ ಸಾಲ ನೀಡಲಾಗುವುದು.
ಶಾಪಿಂಗ್ ಮಾಲ್
ನಮ್ಮ ಉದ್ಯಮವನ್ನು ವೈವಿಧ್ಯಮಯಗೊಳಿಸುವ ಹಾಗೂ ಜನಸಾಮಾನ್ಯರಿಗೆ ದೈನಂದಿನ ವಸ್ತುಗಳ ಖರೀದಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನಮ್ಮದೇ ಕಟ್ಟಡ ಕಟ್ಟಿ ‘ಮಲೆನಾಡು ಮಳಿಗೆ’ ಶಾಪಿಂಗ್ ಮಾಲ್ ತೆರೆದಿದ್ದೇವೆ.