ಹಣವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಬಯಸುವ ಗ್ರಾಹಕರಿಗೆ ಠೇವಣಿಗಳು ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಠೇವಣಿಗಳ ಪ್ರಯೋಜನಗಳು ದೀರ್ಘಾವಧಿಯದ್ದಾಗಿರುತ್ತವೆ, ಅಂದರೆ ನಿರ್ದಿಷ್ಟ ಅವಧಿಗೆ ಹಣವನ್ನು ಉಳಿಸಿದ ನಂತರ ಮಾತ್ರ ಅವುಗಳನ್ನು ಆನಂದಿಸಬಹುದು.
ನಮ್ಮಲ್ಲಿ, ಗ್ರಾಹಕರಿಗೆ ಅತ್ಯಂತ ಅನುಕೂಲಕರವಾಗುವಂತೆ ಯೋಜಿಸಲಾದ ಹಲವು ರೀತಿಯ ಠೇವಣಿ ಯೋಜನೆಗಳು ಲಭ್ಯವಿದೆ.
ಹಿರಿಯ ನಾಗರೀಕರಿಗೆ 0.50% ಹೆಚ್ಚುವರಿ ಬಡ್ಡಿ ಲಭ್ಯವಿದೆ
ಸದಸ್ಯರ ಉಳಿತಾಯ ಖಾತೆ
ಎಲ್ಲಾ ದಿನನಿತ್ಯದ ಬ್ಯಾಂಕಿಂಗ್ ಅಗತ್ಯಗಳಿಗೆ ಈ ಖಾತೆಯು ಅತ್ಯಂತ ಅನುಕೂಲಕರವಾಗಿದೆ. ನೀವು ಯಾವುದೇ ಮೊತ್ತದ ನಗದು, ಚೆಕ್‌ಗಳು ಅಥವಾ ಯಾವುದೇ ಇತರ ಹಣಕಾಸು ಸಾಧನಗಳನ್ನು ಖಾತೆಗೆ ಜಮಾ ಮಾಡಬಹುದು ಮತ್ತು ಯಾವುದೇ ಸಮಯದಲ್ಲಿ ನಿಮಗೆ ಅಗತ್ಯವಿರುವ ಮೊತ್ತವನ್ನು ಹಿಂಪಡೆಯಲು ನಿಮಗೆ ಇದರಲ್ಲಿ ಅವಕಾಶವಿದೆ.
ನಿಶ್ಚಿತ ಠೇವಣಿ ಯೋಜನೆ
ಇವುಗಳು ಒಂದು ನಿರ್ದಿಷ್ಟ ಅವಧಿಗೆ ಇರಿಸಲಾದ ಠೇವಣಿಗಳಾಗಿವೆ ಮತ್ತು ಬಡ್ಡಿಯನ್ನು ತ್ರೈಮಾಸಿಕ ಅಥವಾ ಮಾಸಿಕ ಅಂತರದಲ್ಲಿ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಪಾವತಿಸಲಾಗುತ್ತದೆ. ಉಳಿತಾಯ ಬ್ಯಾಂಕ್ ಖಾತೆ ಮತ್ತು ಸಂಚಿತ ಠೇವಣಿ ಯೋಜನೆಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಬಡ್ಡಿ ದರವನ್ನು ಹೊಂದಿರುತ್ತದೆ.
ಇದರಲ್ಲಿ ನೀವು ನಿಯಮಿತವಾಗಿ ಬಡ್ಡಿಯನ್ನುಪಡೆಯುತ್ತ ಹಣವನ್ನು ಭವಿಷ್ಯದ ಅಗತ್ಯಗಳಿಗೆ ಕಾಪಾಡಿಕೊಳ್ಳಬಹುದು, ಇಲ್ಲವೇ ನಿರಂತರವಾಗಿ ತೊಡಗಿಸಿಕೊಂಡಿರಬಹುದು.
- 91 – 179 ದಿನಗಳಿಗೆ – 5.50 %
- 180 -364 ದಿನಗಳಿಗೆ – 6.0 %
ಸಮೃದ್ಧಿ ಠೇವಣಿ ಯೋಜನೆ
ಇದು ಅವಧಿ ಠೇವಣಿಗಳ ಮುಂದುವರಿದ, ಸುಧಾರಿತ ಆವೃತ್ತಿಯಾಗಿದ್ದು, ತ್ರೈಮಾಸಿಕವಾಗಿ ನೀಡಲ್ಪಡುವ ಬಡ್ಡಿಯನ್ನು ನಿಮ್ಮ ಅಸಲಿಗೆ ಸೇರಿಸಲಾಗುತ್ತದೆ ಮತ್ತು ಈ ಪ್ರಕ್ರಿಯೆಯು ಅವಧಿ ಮುಕ್ತಾಯವಾಗುವವರೆಗೆ ಮುಂದುವರಿಯುತ್ತದೆ. ಪ್ರತಿಸಲ ಜಮೆಯಾದ ಬಡ್ಡಿ ಮುಂದಿನ ಬಾರಿಯ ಬಡ್ಡಿಗೆ ಅರ್ಹವಾಗಿ ಅಸಲಿಗೆ ಸೇರುವುದರಿಂದ ಬಡ್ಡಿಗೆ ಬಡ್ಡಿ ಸೇರಿ ಚಕ್ರಬಡ್ಡಿಯಾಗಿ ನಿಮ್ಮ ಹಣ ವೇಗವಾಗಿ ಬೆಳೆಯುತ್ತ ಹೋಗುತ್ತದೆ.
ಚಕ್ರಬಡ್ಡಿ ಮಾಡುವ ಮ್ಯಾಜಿಕ್ ಇಲ್ಲಿ ಕಾಣುತ್ತದೆ.
- 1 ವರ್ಷ – 8.50 %
- 2 ವರ್ಷ – 9.00 %
- 3 ವರ್ಷ – 8.50 %
ರೂ.5000-00 ಠೇವಣಿಯೊಂದಿಗೆ ಉದಾಹರಣೆ
ಕ್ರಮ ಸಂಖ್ಯೆ | ಅವಧಿ | ಬಡ್ಡಿ ದರ | ಮೊತ್ತ | ಅವಧಿ ಅಂತ್ಯಕ್ಕೆ ಪಾವತಿಯಾಗುವ ಮೊತ್ತ |
---|---|---|---|---|
1 | 1 ವರ್ಷ | 8.50 % | ರೂ.5000-00 | ರೂ.5439-00 |
2 | 2 ವರ್ಷ | 9.0 % | ರೂ.5000-00 | ರೂ.5974-00 |
3 | 3 ವರ್ಷ | 8.50 % | ರೂ.5000-00 | ರೂ.6435-00 |
ಸಂಚಿತ ಠೇವಣಿ ಯೋಜನೆ
ನಿಮ್ಮ ಉಳಿತಾಯದ ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಅಂತರದಲ್ಲಿ ಠೇವಣಿ ಮಾಡಲು ಇದು ಅತ್ಯಂತ ಅನುಕೂಲಕರ ಯೋಜನೆಯಾಗಿದೆ. ಇದು ಸಂಬಳ ಪಡೆಯುವ ನೌಕರ ವರ್ಗದವರು,ವ್ಯಾಪಾರ ಉದ್ಯಮಿಗಳು, ಮತ್ತು ಮಾಸಿಕ ಆದಾಯ ಹೊಂದಿರುವ ಎಲ್ಲಾ ರೀತಿಯ ಗ್ರಾಹಕರಿಗೆ ಸೂಕ್ತವಾಗಿದೆ.
ಈ ಯೋಜನೆಯು ಉಳಿತಾಯ ಖಾತೆಗಳ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಸಹ ಹೊಂದಿದ್ದು ಅವಧಿಯ ಕೊನೆಯಲ್ಲಿ ನಿಮ್ಮ ಹಣ ಬಡ್ಡಿಯೊಂದಿಗೆ ಹಿಂದಿರುಗಿಸಲ್ಪಡುತ್ತದೆ. ಯಾವುದೇ ರೀತಿಯ ಮುಂದಿನ ವೆಚ್ಚಕ್ಕಾಗಿ ನಿಯಮಿತವಾಗಿ ಉಳಿತಾಯ ಮಾಡಲು ಈ ಯೋಜನೆ ಅತ್ಯಂತ ಸೂಕ್ತವಾಗಿದೆ
- 1 ವರ್ಷ – 5.00 %
- 2 ವರ್ಷ – 6.00 %
- 3 ವರ್ಷ – 7.00 %
- 4 ವರ್ಷ – 8.00 %
- 5 ವರ್ಷ – 9.00 %
ವಾಮನ ನಿಧಿ ಖಾತೆ (ಪಿಗ್ಮಿ)
ಈ ಯೋಜನೆಯಡಿಯಲ್ಲಿ ನಮ್ಮ ಪಿಗ್ಮಿ ಏಜೆಂಟರು ನಿಮ್ಮ ಆಫೀಸು ಅಥವಾ ಅಂಗಡಿ ಮುಂಗಟ್ಟಿಗೆ ಬಂದು ಹಣವನ್ನು ಪಡೆದು ರಸೀದಿ ನೀಡುತ್ತಾರೆ. ಯಾರಿಗೆ ದಿನವೂ ಹಣ ಜಮಾ ಮಾಡುವ ಅಗತ್ಯವಿದೆಯೋ ಹಾಗೂ ಸಂಸ್ಥೆಯ ಶಾಖೆಗೆ ಬರಲು ಸಮಯವಿಲ್ಲವೋ ಅಂತಹ ಗ್ರಾಹಕರು ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯ ನಿಯಮಾವಳಿಗಳನ್ನು ನಮ್ಮ ಶಾಖೆಯ ಸಿಬ್ಬಂದಿಗಳಿಂದ ಮಾತ್ರ ಪಡೆಯಬಹುದು.
ನಮ್ಮ ಠೇವಣಿದಾರರ ಹಿತರಕ್ಷಣೆಯೇ ನಮ್ಮ ಸಂಸ್ಥೆಯ ಮುಖ್ಯ ಜವಾಬ್ದಾರಿ. ಅದಕ್ಕಾಗಿ ಬೇಕಾದ ಎಲ್ಲ ತರಹದ ಚಕ್ಕುಬಂದಿಗಳನ್ನು ಎಲ್ಲ ಹಂತಗಳಲ್ಲೂ ಇಡಲಾಗಿದೆ ಮತ್ತು ಸಂಸ್ಥೆಯ ನಿರ್ದೇಶಕ ಮಂಡಳಿ ಈ ನಿಟ್ಟಿನಲ್ಲಿ ಸದಾ ಜಾಗೃತವಾಗಿಯೇ ಇರುತ್ತದೆ.
- ವರ್ಷಕ್ಕೆ 3.50 %
ಮಾಸಿಕ ಠೇವಣಿ
ಮಾಸಿಕ ಠೇವಣಿ: ನಿಗದಿತ ಬಡ್ಡಿದರದಲ್ಲಿ ಸರಳಬಡ್ಡಿ ಲೆಕ್ಕಾಚಾರ ಮಾಡಿ ಮಾಸಿಕ/ತ್ರೈಮಾಸಿಕ/ ಅರ್ಧವಾರ್ಷಿಕವಾಗಿ ಠೇವಣಿದಾರರಿಗೆ ಪಾವತಿಸಲಾಗುವುದು.
ಬಡ್ಡಿ ದರ
- 1 ವರ್ಷ – 8.50 %
- 2 ವರ್ಷ – 9.00 %
- 3 ವರ್ಷ – 8.50 %